ಆರ್ಥಿಕ ವರ್ಷ 27ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಿಗೆ ಒಟ್ಟು ₹4,666 ಕೋಟಿ ವಿಮಾ ಪ್ರಯೋಜನ ಪಾವತಿಸಿದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್
- ಹಣಕಾಸು ವರ್ಷ 2027ರ ಮೊದಲ ತ್ರೈಮಾಸಿಕದಲ್ಲಿ ಶೇ. 4ರಷ್ಟು ವೃದ್ಧಿಸಿದ ಟರ್ಮ್ ಪ್ಲಾನ್ ವ್ಯವಹಾರ
- ಮೊದಲ ತ್ರೈಮಾಸಿಕದಲ್ಲಿ ಉದ್ಯಮದಲ್ಲೇ ಅತ್ಯುನ್ನತವಾದ ಶೇ. 3ರಷ್ಟು ಕ್ಲೈಮ್ ಸೆಟಲ್ಮೆಂಟ್ ಅನುಪಾತ ಸಾಧನೆ
- ತೆರಿಗೆಯ ನಂತರದ ನಿವ್ವಳ ಲಾಭ ವಾರ್ಷಿಕ ಆಧಾರದ ಮೇಲೆ ಶೇ. 8ರಷ್ಟು ಏರಿಕೆಯಾಗಿ ₹386 ಕೋಟಿಗೆ ತಲುಪಿದೆ
- ಮುಂಬೈ: ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಸಂಸ್ಥೆಯು ಜೂನ್ 2026ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ ಶೇ. 8ರಷ್ಟು ಪ್ರಗತಿಯೊಂದಿಗೆ ₹386 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಮುಖವಾಗಿ, ಕಂಪನಿಯ ಟರ್ಮ್ ಪ್ಲಾನ್ (ರಿಟೇಲ್ ಪ್ರೊಟೆಕ್ಷನ್) ವ್ಯವಹಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕವಾಗಿ ಶೇ. 60.4ರಷ್ಟು ಭರ್ಜರಿ ಪ್ರಗತಿ ದಾಖಲಿಸಿದೆ. ಇದರೊಂದಿಗೆ, ಕಂಪನಿಯ ಹೆಸರನ್ನು ಐಸಿಐಸಿಐ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕಂಪನಿಯ ಆಡಳಿತ ಮಂಡಳಿ (ಬೋರ್ಡ್) ಅನುಮೋದನೆ ನೀಡಿದೆ.
- ಈ ಕುರಿತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನೂಪ್ ಬಾಗ್ಚಿ ಮಾತನಾಡಿ, “ಗ್ರಾಹಕರಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಕಾರ್ಯತಂತ್ರದ ಪ್ರಮುಖ ಮೂಲಮಂತ್ರವಾಗಿದೆ. ತನಿಖೆಗೆ ಒಳಪಡದ ಕ್ಲೈಮ್ ಗಳಿಗೆ ಕೇವಲ 1 ದಿನದ ಸರಾಸರಿ ಅವಧಿಯಲ್ಲಿ ಪರಿಹಾರ ಒದಗಿಸುವ ಮೂಲಕ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಉದ್ಯಮದಲ್ಲೇ ಅತ್ಯುನ್ನತವಾದ ಶೇ. 3ರಷ್ಟು ಕ್ಲೈಮ್ ಸೆಟಲ್ ಮೆಂಟ್ ಅನುಪಾತವನ್ನು ನಾವು ಸಾಧಿಸಿದ್ದೇವೆ. ಇದು ಗ್ರಾಹಕರು ಮತ್ತು ಅವರ ಕುಟುಂಬಗಳಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ನೆರವಾಗುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಪ್ರಸಕ್ತ ತ್ರೈಮಾಸಿಕದಲ್ಲಿ, ನಾವು ₹1,306 ಕೋಟಿ ಮೌಲ್ಯದ ಡೆತ್ ಕ್ಲೈಮ್ ಗಳನ್ನು ಇತ್ಯರ್ಥಪಡಿಸಿದ್ದೇವೆ ಹಾಗೂ ಮೆಚ್ಯೂರಿಟಿ ಮತ್ತು ಸರ್ವೈವಲ್ ಬೆನಿಫಿಟ್ಸ್ ಆಗಿ ₹3,360 ಕೋಟಿ ಪಾವತಿಸಿದ್ದೇವೆ. ಇದು ನಮ್ಮ ಪಾಲಿಸಿದಾರರಿಗೆ ಸೂಕ್ತ ಸಮಯದಲ್ಲಿ ಹಣಕಾಸಿನ ರಕ್ಷಣೆ ಮತ್ತು ಮಾನಸಿಕ ನೆಮ್ಮದಿ ನೀಡುವ ನಮ್ಮ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೆ, ಕಳೆದ ಹಣಕಾಸು ವರ್ಷದಲ್ಲಿ ನಾವು ₹5,149 ಕೋಟಿ ಮೌಲ್ಯದ ಡೆತ್ ಕ್ಲೈಮ್ ಗಳನ್ನು ಇತ್ಯರ್ಥಪಡಿಸಿದ್ದೇವೆ ಮತ್ತು ಮೆಚ್ಯೂರಿಟಿ ಹಾಗೂ ಸರ್ವೈವಲ್ ಪ್ರಯೋಜನಗಳ ರೂಪದಲ್ಲಿ ಒಟ್ಟು ₹15,363 ಕೋಟಿ ಪಾವತಿಸಿದ್ದೇವೆ” ಎಂದು ವಿವರಿಸಿದರು.
ಮಾತು ಮುಂದುವರಿಸಿದ ಅವರು, “ನಮ್ಮ ಕಂಪನಿಯ ತೆರಿಗೆಯ ನಂತರದ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ ಶೇ. 27.8ರಷ್ಟು ಏರಿಕೆಯಾಗಿ ₹386 ಕೋಟಿಗೆ ತಲುಪಿದೆ. ಪ್ರಮುಖವಾಗಿ, ಇದೇ ಮೊದಲ ತ್ರೈಮಾಸಿಕದಲ್ಲಿ ನಮ್ಮ ರಿಟೇಲ್ ಪ್ರೊಟೆಕ್ಷನ್ ವ್ಯವಹಾರದಲ್ಲಿ ವಾರ್ಷಿಕವಾಗಿ ಶೇ. 60.4ರಷ್ಟು ಬಲಿಷ್ಠ ಬೆಳವಣಿಗೆಯನ್ನು ದಾಖಲಿಸಿದ್ದೇವೆ. ಇದು ಭಾರತದ ಸುರಕ್ಷತಾ ಅಗತ್ಯತೆಗಳನ್ನು ಪೂರೈಸುವಲ್ಲಿ ನಮ್ಮ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಮತ್ತು ಗ್ರಾಹಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ನಾವು ಉತ್ಪಾದನಾ ಪ್ರಮಾಣದ ಮಿತವ್ಯಯ, ತಂತ್ರಜ್ಞಾನ, ಎಐ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ನಿರಂತರವಾಗಿ ಬಳಸಿಕೊಳ್ಳಲಿದ್ದೇವೆ. ಮುಖ್ಯವಾಗಿ, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ನಮ್ಮ ಉಳಿತಾಯ ವೆಚ್ಚ-ಪ್ರೀಮಿಯಂ ಅನುಪಾತವು 50 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆಯಾಗುವ ಮೂಲಕ ಶೇ. 13.6ಕ್ಕೆ ತಲುಪಿದೆ. ಇದು ನವೀನ ಆವಿಷ್ಕಾರಗಳಲ್ಲಿ ಮರುಹೂಡಿಕೆ ಮಾಡಲು, ಡಿಜಿಟಲ್ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಭವಿಷ್ಯದ ಬೆಳವಣಿಗೆಗೆ ನೆರವಾಗಲು ನಮಗೆ ಅನುವು ಮಾಡಿಕೊಡುತ್ತದೆ.
ಅಗತ್ಯ ಅನುಮೋದನೆಗಳಿಗೆ ಒಳಪಟ್ಟು, ಕಂಪನಿಯ ಹೆಸರನ್ನು ಐಸಿಐಸಿಐ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ನಮ್ಮ ಆಡಳಿತ ಮಂಡಳಿಯು ಇತ್ತೀಚೆಗೆ ಒಪ್ಪಿಗೆ ನೀಡಿದೆ. ಪ್ರಸ್ತಾವಿತ ನೂತನ ಹೆಸರು, ಐಸಿಐಸಿಐ ಸಂಸ್ಥೆಯೊಂದಿಗೆ ಹೊಂದಿಕೊಂಡಿರುವ ದಕ್ಷತೆ, ನಂಬಿಕೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ವ್ಯವಹಾರವು ಎಂದಿನಂತೆ ಯಥಾಸ್ಥಿತಿಯಲ್ಲಿ ಸಾಗುತ್ತಾ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಜೀವ ವಿಮಾ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಹತ್ತರ ಅವಕಾಶಗಳನ್ನು ಬಳಸಿಕೊಳ್ಳಲು, ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರ ಮೌಲ್ಯವನ್ನು ಹೆಚ್ಚಿಸಲು ನಾವು ಸಂಪೂರ್ಣ ಗಮನ ಹರಿಸಲಿದ್ದೇವೆ” ಎಂದು ಹೇಳಿದರು.

ಆರ್ಥಿಕ ವರ್ಷ 27ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಿಗೆ ಒಟ್ಟು ₹4,666 ಕೋಟಿ ವಿಮಾ ಪ್ರಯೋಜನ ಪಾವತಿಸಿದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್
Recent Comments